ಶಾಲೆಗೆ ಹೊರಟನು ಪುಟ್ಟಣ್ಣಿ;
ಟ್ಟಿಪ್ ಟಾಪಾಗಿ ಹೊರಟು ನಿಂತನ್ನು ನಮ್ಮಣ್ಣಿ;
ನಾಚಿಕೆ ಏಕೋ ಪುಟ್ಟಣ್ಣಿ;
ಸಮವಸ್ತ್ರ ಧರಸಿ ನಿಂತನು ನಮ್ಮಣ್ಣಿ;
ಕಾಲಿಗೆ ಶೂ ಧರಿಸಿದನು ಪುಟ್ಟಣ್ಣಿ;
ಬ್ಯಾಗನು ಹಗಲಿಗೇರಿಸಿದನು ನಮ್ಮಣ್ಣಿ;
ಅ,ಆ,ಇ,ಈ ಹೇಳುವನು ಪುಟ್ಟಣ್ಣಿ;
A,B,C,D ಬರೆಯುವನು ನಮ್ಮಣ್ಣಿ;
ಶಾಲೆಗೆ ಹೊರಟನು ಪುಟ್ಟಣ್ಣಿ;
ಶಾಲೆಗೆ ಹೊರಟನು ನಮ್ಮಣ್ಣಿ;
ಇಂದು ( ೦೯.೦೬.೨೦೧೧) ಅನೀಶ್ ಗೆ ಶಾಲೆಯ ಮೊದಲ ದಿವಸ. ತಾಯಿಯನ್ನು ಒಂದು ಕ್ಷಣವೂ ಬಿಟ್ಟಿರದವನು ಅದು ಹೇಗೆ ಶಾಲೆಯಲ್ಲಿ ಸಮಯ ಕಳೆಯುವನೋ? ಅನ್ನುವ ಆತಂಕ,ಭಯ ತಾಯಿಗೆ. ಅವನು ಶಾಲೆಯಲ್ಲಿ ಅಳುತ್ತಿದ್ದನೋ! ಇಲ್ಲವೋ ಗೊತ್ತಿಲ್ಲ, ಆದರೆ ಅವನ ತಾಯಿ ಮಾತ್ರ ಚೆನ್ನಾಗಿ ಅತ್ತಳು ಎನ್ನುವುದಕ್ಕೆ ನಾನೇ ಸಾಕ್ಷಿ.
ಗುರುವಾರ, ಜೂನ್ 9, 2011
ಸೋಮವಾರ, ಮೇ 16, 2011
ಮಲಗು ಮಲಗೆನ್ನ ಮರಿಯೆ...
ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
ಮಲಗು ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ
ಜೋ..ಜೋಜೋಜೋ...
ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದಿರೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು
ಜೋ..ಜೋಜೋಜೋ...
ಮಲಗು ಮಲಗೆನ್ನ ಮರಿಯೆ...
ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಿಗೆ ಸಾಟಿಯೆ ಕಾಮ
ತಿಮ್ಮಪ್ಪನಿಗೆ ಮೂರು ನಾಮ
ಜೋ..ಜೋಜೋಜೋ...
ಮಲಗು ಮಲಗೆನ್ನ ಮರಿಯೆ...
ಭಾನುವಾರ, ಮೇ 15, 2011
ಶನಿವಾರ, ಮೇ 14, 2011
ಹುಟ್ಟು

ಅಂದು ೧೮.೦೧.೨೦೦೮ ರ ಶುಕ್ರವಾರ ಗ್ರೀಷ್ಮ ಋತು, ದಕ್ಷಿಣಾಯಣ, ಹುಣ್ಣಿಮೆ
ಮಟ ಮಟ ಮಧ್ಯಾಹ್ನ
ನೆತ್ತಿಯ ಮೇಲೆ ಬಿಸಿಲ ಝಳ
ಹೆರಿಗೆಯ ನೋವಿಲ್ಲ
ಆತಂಕದ ಛಾಯೆ ಯಾರಲ್ಲೂ ಇರಲಿಲ್ಲ
ವೈದ್ಯೆಯ ಅಪ್ಪಣೆಯಾಗಿತ್ತು
"ಸಿದ್ದರಾಗಿರಿ ಆಪರೇಷನ್ಗೆ.......
ಕಾಯುವುದು ಎಲ್ಲಿಲ್ಲ ಹೇಳಿ
ಎಲ್ಲವೂ ಓಳ್ಳೆಯದೇ ಆಗಲಿದೆ
ಅವಳಲ್ಲಿ ಭಯದ ಭಾವ
ಹಣೆಯ ಮೇಲೆ ಬೆವರಿನ ಲೇಪ
ಆಸ್ಪತ್ರೆಯ ಬಿಸ್ಕತ್ ಬಣ್ಣದ ಗೌನು
ಗಾಲಿ ಖುರ್ಚಿಯಲ್ಲಿ ವಿಶೇಷ ಕೋಣೆಯಿಂದ ಆಪರೇಷನ್ ಕೊಠಡಿಗೆ ಪಯಣ
ಹೋದ ಸಮಯ ೧ ಗಂಟೆ ೫೦ ನಿಮಿಷ
ಹಸಿರು ಬಣ್ಣದ ಗೌನಿನ ನರ್ಸ್
ಕೈಯಲ್ಲಿ ಮಗು
ಸಮಯ ಆಗ ೨ ಗಂಟೆ ೨೦ ನಿಮಿಷ ಮೊದಲ ಅಳು
ಲೋಕಕ್ಕೆ ಪಾದಾರ್ಪಣೆ ಮಾಡಿದ ಮೇಲೆ
ಮೊದಲ ಮಜ್ಜನ ಜಾನ್ಸನ್ ಸೋಪಿನಿಂದ
ಹಾಗೂ ಮೈಗೆಲ್ಲಾ ಜಾನ್ಸನ್ ಬೇಬಿ ಸಾಫ್ಟ್ ಪೌಡರಿನಿಂದ ಲೇಪ
ಕಣ್ಣು ಮುಚ್ಚಿ ನಿದ್ದೆ- ಮೌನ ಧ್ಯಾನಕ್ಕೆ ಕುಳಿತ ಮುನಿಯಂತೆ
ಮೂರು ದಿನ ಉಪವಾಸ, ಗಾಂಧಿ ತತ್ವದಿಂದಲೇ ಪಾದಾರ್ಪಣೆ.
ಕರಾರವಿಂದೇನ ಪದಾರವಿಂದಂ.....
ಕರಾರವಿಂದೇನ ಪದಾರವಿಂದಂ.....
ಅಂಗೈದಾವರೆಯಿಂದಂಗಾಲತಾವರೆಯನ್ನು
ಮೊಗದತಾವರೆಯೊಳಗೆ ಇರಿಸಿದವನ
ತೆರೆದಾಲದೆಲೆ ಮೇಲೆ ತಾ ಪವಡಿಸಿರುವ
ಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||
ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆ
ಮಲಗಿಹನ ಕೊನೆಮೊದಲೆರಡೂ ಇlಲ್ಲದವನ
ಎಲ್ಲರೊಡೆಯನ ನಮ್ಮ ಒಳಿತಿಗೈತಂದಿರುವ
ಮುದ್ದು ಮುಕುಂದನನು ನಾನು ನೆನೆವೆ ಮನದಲ್ಲಿ ||೨||
ಕನ್ನೈದಿಲೆಯ ತೆರದ ನವಿರು ಮೈಯವನ
ದೇವದೇವತೆಗಳಾದರಿಸಿದ ಪಾದ ಕಮಲನ
ಆಸರೆಯಲಿರುವರಿಗೆ ಕೇಳಿದೆಲ್ಲವ ಕೊಡುವ
ಪುಟ್ಟ ಮುಕುಂದನನು ನಾನು ನೆನೆವೆ ಮನದಲ್ಲಿ ||೩||
ಎಸೆವ ಮುಂಗುರುಳವನ ಸರಗಳಲಿ ಮೆರೆಯುವನ
ಸಿಂಗರದಿ ಮೂಡಿರುವ ಸುಲಿಪಲ್ಲ ಚೆಲುವನ
ತೊಂಡೆ ತುಟಿ ಸೊಗಸಿನ ಅಗಲ ಕಂಗಳಿಹ
ಕೂಸು ಮುಕುಂದನ ನಾನು ನೆನೆವೆ ಮನದಲ್ಲಿ ||೪||
ಹೊರಹೋದ ಗೋಪಿಯರ ಮನೆಗಳಲಿರುವ
ನಿಲುವಿನ ಹಾಲ್ಬೆಣ್ಣೆ ಮೊಸರುಗಳೆಲ್ಲವನು
ಮನಸಾರೆ ತಿಂದು ಕಪಟದಿ ನಿದ್ದೆಯಗೈವ
ಕಳ್ಳ ಮುಕುಂದನನು ನಾನು ನೆನೆವೆ ಮನದಲ್ಲಿ ||೬||
ಯಮುನೆಯೊಳಡಗಿದ್ದ ಘೋರ ಕಾಲಿಯನ
ಹೆಡೆಮೇಲೆ ಕುಣಿದು ನಲಿದದರ ಬಾಲವನೇ
ಕೈಲಿ ಹಿಡಿದವವನ ಚಂದಿರನ ಮೊಗದವನ
ಬಾಲ ಮುಕುಂದನ ನಾನು ನೆನೆವೆ ಮನದಲ್ಲಿ ||೬||
ಒರಳುಕಲ್ಲಿಗೆ ಕಟ್ಟಿಸಿಕೊಂಡ ಉದಾರಿ ಶೌರಿಯ
ಮತ್ತಿ ಮರ ಜೋಡಿಯನು ಕೆಡಹಿಬೀಳಿಸಿದನ
ಅರಳಿರುವ ತಾವರೆಯ ದಳದಗಲ ಕಣ್ಣಿರುವ
ಪೋರ ಮುಕುಂದನನು ನೆನೆವೆ ಮನದಲ್ಲಿ ||೭||
ಮೊಲೆಹಾಲ ಕುಡಿಯುತಲಿ ತಾಯ ಮೊಗವನ್ನು
ಆದರದಿ ನೋಡುತಿಹ ಕಮಲ ಕಣ್ಣವನ
ಮೊದಲಿಗನ ಚಿನ್ಮಯನ ಅಳವು ಮೀರಿದನ
ಕಂದ ಮುಕುಂದನ ನಾನು ನೆನೆವೆ ಮನದಲ್ಲಿ ||೮||
ಸಂಸ್ಕೃತ ಮೂಲ:
ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 1 ||
ಸಂಹೃತ್ಯ ಲೋಕಾನ್ವಟಪತ್ರ ಮಧ್ಯೇ
ಶಯಾನಮಾದ್ಯಂತವಿಹೀನ ರೂಪಮ್|
ಸರ್ವೇಶ್ವರಂ ಸರ್ವಹಿತಾವತಾರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 2 ||
ಇಂದೀವರ ಶ್ಯಾಮಲ ಕೋಮಲಾಂಗಂ
ಇಂದ್ರಾದಿ ದೇವಾರ್ಚಿತ ಪಾದಪದ್ಮಮ್ |
ಸಂತಾನ ಕಲ್ಪದ್ರುಮಮಾಶ್ರಿತಾನಾಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 3 ||
ಲಂಬಾಲಕಂ ಲಂಬಿತ ಹಾರಯಷ್ಟಿಂ
ಶೃಂಗಾರ ಲೀಲಾಂಕುರ ದಂತಪಂಕ್ತಿಮ್ |
ಬಿಂಬಾಧರಾ ಪೂರಿತ ವೇಣುನಾದಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 4 ||
ಶಿಕ್ಯೇ ನಿಧಾಯಾಜ್ಯ ಪಯೋದಧೀನಿ
ಕಾರ್ಯಾಂಗತಾಯಾಂ ವ್ರಜನಾಯಿಕಾಯಾಮ್ |
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 5 ||
ಕಲಿಂದಜಾಂತಸ್ಥಿತ ಕಾಲಿಯಸ್ಯ
ಫಣಾಗ್ರರಂಗೇ ನಟನಪ್ರಿಯಂತಮ್
ತತ್ಪುಚ್ಛ ಹಸ್ತಂ ಶರದಿಂದು ವಕ್ತ್ರಮ್
ಬಾಲಂ ಮುಕುಂದಂ ಮನಸಾ ಸ್ಮರಾಮಿ || 6 ||
ಉಲೂಖಲೇ ಬದ್ಧಮುದಾರ ಶೌರ್ಯಂ
ಉತ್ತುಂಗ ಯುಗ್ಮಾರ್ಜನಭಂಜನತಮ್ |
ಉತ್ಫಲ್ಲ ಪದ್ಮಾಯತ ಚಾರುನೇತ್ರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 7 ||
ಆಲೋಕ್ಯ ಮಾತುರ್ಮುಖಮಾದರೇಣ
ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ |
ತಂ ಚಿನ್ಮಯಂ ದೇವಮನಂತಮಾದ್ಯಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 8 ||
ಏತನ್ಮುಕುಂದಾಷ್ಟಕಮಾದರೇಣ
ಸಕೃತ್ ಪಠೇದ್ಯಃ ಸ ಲಭೇತನ್ಮರ್ತ್ಯಃ |
ಜ್ಞಾನಂಪರಂ ಪಾಪಹರಂ ಪವಿತ್ರಂ
ಆಯುಷ್ಯ ವಿದ್ಯಾಂಚ ಯಶಸ್ತಥೈವ ||
करारविन्देन पदारविन्दं मुखारविन्दे विनिवेशयन्तम् ।
वटस्य पत्रस्य पुटे शयानं बालं मुकुन्दं मनसा स्मरामि ॥१॥
संहृत्य लोकान्वटपत्रमध्ये शयानमाद्यन्तविहीनरूपम् ।
सर्वेश्वरं सर्वहितावतारं बालं मुकुन्दं मनसा स्मरामि ॥२॥
इन्दीवरश्यामलकोमलांगं इन्द्रादिदेवार्चितपादपद्मम् ।
सन्तानकल्पद्रुममाश्रितानां बालं मुकुन्दं मनसा स्मरामि ॥३॥
लम्बालकं लम्बितहारयष्टिं शृंगारलीलांकितदन्तपङ्क्तिम् ।
बिंबाधरं चारुविशालनेत्रं बालं मुकुन्दं मनसा स्मरामि ॥४॥
शिक्ये निधायाद्यपयोदधीनि बहिर्गतायां व्रजनायिकायाम् ।
भुक्त्वा यथेष्टं कपटेन सुप्तं बालं मुकुन्दं मनसा स्मरामि ॥५॥
कलिन्दजान्तस्थितकालियस्य फणाग्ररंगे नटनप्रियन्तम् ।
तत्पुच्छहस्तं शरदिन्दुवक्त्रं बालं मुकुन्दं मनसा स्मरामि ॥६॥
उलूखले बद्धमुदारशौर्यं उत्तुंगयुग्मार्जुन भंगलीलम् ।
उत्फुल्लपद्मायत चारुनेत्रं बालं मुकुन्दं मनसा स्मरामि ॥७॥
आलोक्य मातुर्मुखमादरेण स्तन्यं पिबन्तं सरसीरुहाक्षम् ।
सच्चिन्मयं देवमनन्तरूपं बालं मुकुन्दं मनसा स्मरामि ॥८॥
-ಕನ್ನಡಕ್ಕೆ ಅನುವಾದ:ಹಂಸಾನಂದಿ
ಕೃಷ್ಣನಾಗಿ ಅನೀಶ್
ಕಂಗಳಿಗೆ ಹಬ್ಬವಾಯಿತಯ್ಯಾ..
ಮಂಗಳಾತ್ಮಕ ಪುರಂದರ ದಾಸರನು ಕಂಡು...||
ಸಕಲ ತೀರ್ಥ ಯಾತ್ರೆ ಮಾಡಿದ ಫಲವು
ಸಕಲ ಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗಿರಥಿ ಮಜ್ಜನದ ಫಲವು
ರುಕುಮಿಣಿ ಪತಿಯ ಪದಭಜಕರನ್ನು ಕಂಡು...|| ೧ ||
ಇವನ ನರನೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈ ಹೊಡೆದು ಹೇಳಿದರು
ಅವನಿಯೊಳು ಅತಿ ದುರ್ಲಭಾವು ನಂದಗೋಪನ
ಕುವರನಿದ್ದೆಡೆ ವೈಕುಂಠ ವೆಂಬುವರ ಕಂಡು..... || ೨ ||
ಧನ್ಯನಾದೆನು ನಾನೂ ಮನುಜ ಜನ್ಮದಿ ಪುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗ ಶಯನ ಶ್ರೀ ಕೃಷ್ಣನ ದಾಸರನು
ಚೆನ್ನಾಗಿ ಸ್ಮರಿಸಿ ಪಾವನನಾದೆನಿಂದು.... || ೩ ||
ರಚನೆ:ವ್ಯಾಸರಾಯ
ಅನೀಶ್ ಅಂದರೆ ತುಂಟತನ
ಅನೀಶ ನ ತುಂಟತನದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವನಿಗಿನ್ನೂ ೩ ವರ್ಷಗಳಷ್ಟೇ ಆದರೂ ಅವನ ತುಂಟತನದಿಂದ ಅವನ ಅಮ್ಮ ಸೌಮ್ಯಗೆ ತುಂಬಾ ತಲೇನೋವು. ಅವನನ್ನು ಹೇಗೆ ಅವಳು ನಿಭಾಯಿಸುತ್ತಾಳೋ ನಾ ಕಾಣೆ. ಬೆಳಿಗ್ಗೆ ಎದ್ದಾಗಿನಿಂದ ನಾನ್ ಸ್ಟಾಪ್ ಚೈತನ್ಯದ ಚಿಲುಮೆಯಾಗಿ ಮನೆಯಲೆಲ್ಲಾ ಅವನ ಆಟಿಕೆಗಳನ್ನು ಬಿಸುಟುವುದು, ಕಾಗದಗಳನ್ನು ಹರಿಯುವುದು ಅಬ್ಬಬ್ಬ ಭಾನುವಾರ ನನಗಂತೂ ಸಾಕುಸಾಕಾಗುತ್ತೆ.ಅವನ ಒಂದೇ ಒಂದು ಆಟಿಕೆ ಕೂಡ ಸರಿ ಇಲ್ಲದೇ ಕೈ-ಕಾಲು ಮುರಿದುಕೊಂಡಿರುವುದೇ ನನ್ನ ಮಾತಿಗೆ ಸಾಕ್ಷಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)